Sunday, July 15, 2012

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶ್ರೇಷ್ಟ ಪ್ರಾಜೆಕ್ಟ್ ಪ್ರಶಸ್ತಿ



"ತಲೆಯ ಚಲನೆಯ ಮೂಲಕ ಗೃಹೋಪಯೋಗಿ ಸಲಕರಣೆಗಳ ನಿಯಂತ್ರಣ;
ವಿಕಲಚೇತನರ ಹಾಗೂ ಪಾರ್ಶ್ವವಾಯು ಪೀಡಿತರ ಅಶಾಕಿರಣ"

ವಿದ್ಯಾರ್ಥಿನಿಯರು:
 ಅಕ್ಷತಾ ಬಿ. 
ಯಾಮಿನಿ ಎಸ್.
ಎಂ. ತಬಸಮ್,
ಅನೂಷಾ ಕೆ.ಅರ್.
ಮಾರ್ಗದರ್ಶನ: ಶಿಲ್ಪಾ ಮೆಹತಾ

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಇನ್ಸ್ತ್ರುಮೆಂಟೇಶನ್ ವಿಭಾಗದ ವಿದ್ಯಾರ್ಥಿನಿಯರು ರೂಪಿಸಿದ "ತಲೆಯ ಚಲನೆಯ ಮೂಲಕ ಗೃಹೋಪಯೋಗಿ ಸಲಕರಣೆಗಳ ನಿಯಂತ್ರಣ;ವಿಕಲಚೇತನರ ಹಾಗೂ ಪಾರ್ಶ್ವವಾಯುಪೀಡಿತರ ಅಶಾಕಿರಣ"  ಎಂಬ ಪ್ರಾಜೆಕ್ಟ್ ಗೆ  ಕರ್ನಾಟಕ ರಾಜ್ಯ ವಿಜ್ನಾನ ಮತ್ತು ತಂತ್ರಜ್ನಾನ ಮಂಡಳಿಯ ರಾಜ್ಯ ಮಟ್ಟದ ವಸ್ತು ಪ್ರದರ್ಶನದಲ್ಲಿ ಶ್ರೇಷ್ಟ ಪ್ರಾಜೆಕ್ಟ್ ಪ್ರಶಸ್ತಿ ಲಭಿಸಿದೆ. 

ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದದಲ್ಲಿ ೧೩ ನಮತ್ತು ೧೪ ರಂದು ಈ ವಸ್ತು ಪ್ರದರ್ಶನವು ಜರುಗಿತು. ರಾಜ್ಯದ ನಾನಾ ಎಂಜಿನಿಯರಿಂಗ್ ಕಾಲೇಜುಗಳ 800ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು, 240ಕ್ಕೂ ಅಧಿಕ ಪ್ರಾಜೆಕ್ಟ್‌ಗಳ ಪ್ರದರ್ಶನಗೊಂಡವು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಮುಖ್ಯಸ್ಥರಾದ ಪ್ರೊ.ಎಸ್.ಎಂ.ಶಶಿಧರ ಮತ್ತು ಎಚ್,ಎಂ,ಶಿವಪ್ರಕಾಶ ಸ್ವಾಮಿ ಯವರು ೨೪ ವಿದ್ಯಾರ್ಥಿ, ವಿದ್ಯಾರ್ಥಿನಿಯರೊದಿಗೆ ೬ ಪ್ರಾಜೆಕ್ಟ್ ಗಳೊಂದಿಗೆ ಈ ಪ್ರದರ್ಶನದಲ್ಲಿ ಭಾಗವಹಿಸಿದ್ದರು. 

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಶ ಶ್ರೀ ಅರವಿ ಬಸವನ ಗೌಡ ಪ್ರಾಂಶುಪಾಲ ಡಾ.ಪಿ.ಖಗೇಶನ್ ಅವರು ಬಹುಮಾನ ವಿಜೇತ ವಿದ್ಯಾರ್ಥಿನಿಯರನ್ನು, ಮರ್ಗದರ್ಶಕರಾದ ಪ್ರೊ. ಶಿಲ್ಪಾ ಮೆಹತಾ ಅವರನ್ನು ಅಭಿನಂದಿಸಿದ್ದಾರೆ.

ಪಿಡಿಐಟಿಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಈ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ ಪಡೆಯುತ್ತಿದ್ದು ಇದೊಂದು ದಾಖಲೆಯಾದಗಿದೆ. ರಾಜ್ಯದ ಗುಲ್ಬರ್ಗಾ ವಿಭಾಗದಿಂದ ಪ್ರಶಸ್ತಿ ಗಳಿಸಿದ ಏಕೈಕ ಕಾಲೇಜು ಪಿಡಿಐಟಿಯಾಗಿದೆ ಎಂಬುದು ಮತ್ತೊಂದು ಹೆಗ್ಗಳಿಕೆಯಾಗಿದೆ.

1 comment:

  1. thanks for sharing this here sir. i can't read the report, but thanks all the same.

    ReplyDelete